ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಸೆರೆ

24/08/2020

ಮಡಿಕೇರಿ ಆ. 24 : ಪ್ರೀತಿಸುವ ನಾಟಕವಾಡಿ ಉಡುಗೊರೆಗಳನ್ನು ನೀಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಅಯ್ಯಪ್ಪ ಬೆಟ್ಟ ಬಡಾವಣೆಯ ನಿವಾಸಿ ಶಿವಕುಮಾರ್ (24) ಎಂಬಾತನೇ ಬಂಧಿತ ಆರೋಪಿ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಲ್ಲದೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆವೊಡ್ಡಿರುವ ಆರೋಪವಿದೆ. ಬಾಲಕಿ ತನ್ನ ತಂದೆಗೆ ಘಟನೆ ಕುರಿತು ಹೇಳಿಕೊಂಡ ನಂತರ ದೂರು ನೀಡಲಾಗಿದೆ.