ಮನೆ ಬಾಗಿಲಿಗೆ ಕರಿಮೆಣಸು ಬಳ್ಳಿ ವಿತರಿಸಿದ ಮಣಿಉತ್ತಪ್ಪ

24/08/2020

ಮಡಿಕೇರಿ ಆ. 24 : ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ಖುದ್ದು ಇರಳವಳಮುಡಿ ಗ್ರಾಮದ ಫಲಾನುಭವಿಗಳ ಮನೆ ಬಾಗಿಲಿಗೆ ಕರಿಮೆಣಸು ಬಳ್ಳಿಗಳನ್ನು ವಿತರಿಸಿದರು. ರೈತರು ದೂರದ ಕೂಡಿಗೆ ಕೃಷಿ ನರ್ಸರಿಗೆ ತೆರಳಿ ಬಳ್ಳಿಗಳನ್ನು ತರಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ತಾವೇ ನರ್ಸರಿಯಿಂದ ಬಳ್ಳಿಗಳನ್ನು ತಂದು ಹಂಚುವ ಮೂಲಕ ರೈತರಿಗೆ ಸಹಕಾರಿಯಾದರು.
ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.