ಮಹಾಮಳೆಯಿಂದ ಮನೆ ಕಳೆದುಕೊಂಡ ನೆಲ್ಲಿರ ರಂಜಿನಾಚಪ್ಪ ಗೆ ಕಾಂಗ್ರೆಸ್ ಮುಖಂಡರಿಂದ ಆರ್ಥಿಕ ನೆರವು

24/08/2020

ಮಡಿಕೇರಿ ಆ. 24 : ಗಾಳಿ ಸಹಿತ ಮಹಾಮಳೆಯಿಂದ ವಾಸದ ಮನೆಯನ್ನು ಕಳೆದುಕೊಂಡ ಬಿರುನಾಣಿ ಗ್ರಾಮದ ನೆಲ್ಲಿರ ರಂಜಿ ನಾಚಪ್ಪ ಅವರಿಗೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ರೂ.10 ಸಾವಿರ ಹಾಗೂ ಬಿ.ಶೆಟ್ಟಿಗೇರಿಯ ಕೊಲ್ಲಿರ ಬೋಪಣ್ಣ ಅವರು ರೂ.5 ಸಾವಿರ ಆರ್ಥಿಕ ನೆರವನ್ನು ನೀಡಿದರು.‌
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಜಿ.ಪಂ.ಸದಸ್ಯರಾದ ಮುಕ್ಕಾಟೀರ ಶಿವು ಮಾದಪ್ಪ ಮತ್ತಿತರರು ಈ ಸಂದರ್ಭ ಹಾಜರಿದ್ದರು.