ಟೊಮೆಟೊ ಗಾರ್ಲಿಕ್ ಚಿಕನ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ಚಿಕನ್ ಅರ್ಧ ಕೆಜಿ, ಈರುಳ್ಳಿ 2, ಬೆಳ್ಳುಳ್ಳಿ ಪೇಸ್ಟ್ ಒಂದೂವರೆ ಚಮಚ, ಟೊಮೆಟೊ ಪೇಸ್ಸ್1 ಕಪ್, ಹಸಿ ಮೆಣಸಿನಕಾಯಿ 2, ಕೆಂಪು ಮೆಣಸು 1, ಅರಿಶಿಣ ಪುಡಿ ಅರ್ಧ ಚಮಚ, ರುಚಿಗೆ ತಕ್ಕ ಉಪ್ಪು, ಎಣ್ಣೆ.
ತಯಾರಿಸುವ ವಿಧಾನ :ಚಿಕನ್ ಅನ್ನು ತೊಳೆದು ಅದಕ್ಕೆ ಉಪ್ಪು ಮತ್ತು ಅರಿಶಿಣ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಕಾಲ ಇಡಬೇಕು, ಈಗ1 ಚಮಚ ಎಣ್ಣೆಯನ್ನು ಸಾರು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್, ಮುರಿದ ಒಣ ಮೆಣಸು ಹಾಕಿ ಸೌಟ್ ನಿಂದ ಹುರಿಯಿರಿ. ಈಗ ಟೊಮೆಟೊ ಪೇಸ್ಟ್ ಹಾಕಿ 2-3 ನಿಮಿಷ ಬಿಸಿ ಮಾಡಿ ಅದಕ್ಕೆ ಚಿಕನ್ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. (ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ). ಚಿಕನ್ ಗ್ರೇವಿ ರೀತಿಯಲ್ಲಿ ಆದ ಮೇಲೆ ಉಪ್ಪು ಸರಿಯಾಗಿ ಇದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ಟೊಮೆಟೊ ಗಾರ್ಲಿಕ್ ಚಿಕನ್ ರೆಸಿಪಿ ರೆಡಿ.
