ಬಾಳೆಲೆ ವಿದ್ಯುತ್ ಉಪಕೇಂದ್ರಕ್ಕೆ 2 ಎಕರೆ ನಿವೇಶನ ಬೇಕು

August 25, 2020

ಮಡಿಕೇರಿ ಆ. 25 : ಬಾಳೆಲೆ ವಿದ್ಯುತ್ ಉಪಕೇಂದ್ರಕ್ಕೆ 2 ಎಕರೆ ನಿವೇಶನದ ಅಗತ್ಯವಿದ್ದು, ಸರ್ಕಾರಿ ಜಮೀನಿಲ್ಲದ ಹಿನ್ನೆಲೆ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಬೇಕಾಗಿದೆ ಎಂದು ಕೆಪಿಟಿಸಿಎಲ್‍ನ ಮಡಿಕೇರಿ ಕಾರ್ಯಪಾಲಕ ಅಭಿಯಂತರ ಮಾದೇಶ್ ಮಾಹಿತಿ ನೀಡಿದ್ದಾರೆ.
ಖಾಸಗಿ ಜಾಗಕ್ಕೆ ನೀಡಬೇಕಾದ ಖರೀದಿ ಮೊತ್ತವನ್ನು ಕೊಡಗು ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಅದನ್ನು ಪಾವತಿಸಲು ಸಿದ್ಧವಿದೆ. ಜಮೀನು ಸಿಕ್ಕಿದ ತಕ್ಷಣ ಉಪಕೇಂದ್ರ ಕಾಮಗಾರಿ ಆರಂಭವಾಗಲಿದೆ ಎಂದರು.

error: Content is protected !!