ಕೊಡಗು ಜಿ. ಪಂ. ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯಾಗಿ ಭಂವರ್ ಸಿಂಗ್ ಮೀನಾ ಅಧಿಕಾರ ಸ್ವೀಕಾರ

26/08/2020

ಮಡಿಕೇರಿ ಆ.26 : ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಭಂವರ್ ಸಿಂಗ್ ಮೀನಾ ಅವರು ಅಧಿಕಾರ ವಹಿಸಿಕೊಂಡರು.
ಪ್ರಭಾರ ಜಿ.ಪಂ ಸಿ.ಇ.ಒ ಮತ್ತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಗರದ ಜಿ.ಪಂ ಭವನದಲ್ಲಿ ನೂತನ ಸಿ.ಇ.ಒ ಭಂವರ್ ಸಿಂಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ರಾಜಸ್ತಾನ ಮೂಲದವರಾದ ಭಂವರ್ ಸಿಂಗ್ ಮೀನಾ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಿ, ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಐಪಿಎಸ್ ಉತ್ತೀರ್ಣಗೊಂಡು ತರಬೇತಿ ಪಡೆದ ಬಳಿಕ, ಐ.ಎ.ಎಸ್ ಪರೀಕ್ಷೆ ಪೂರ್ಣಗೊಳಿಸಿರುವ ಭಂವರ್ ಸಿಂಗ್ ಮೀನಾ ಅವರು ಐಐಟಿಯಲ್ಲಿ (ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವ್ಯಾಸಂಗ ಮಾಡಿದ್ದಾರೆ.