ಕೊಡಗು ಸಿರಿಗನ್ನಡ ವೇದಿಕೆಯಿಂದ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯ ವಿಜೇತರು

August 29, 2020

ಮಡಿಕೇರಿ ಆ. 29 : ಕೊಡಗು ಸಿರಿಗನ್ನಡ ವೇದಿಕೆಯಿಂದ “ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರು” ಎನ್ನುವ ವಿಷಯದ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಡಿ.ಕೆ. ಹರೀಶ್ ಪ್ರಥಮ, ಬಲ್ಯಂಡ. ಎಸ್. ಪ್ರತೀಕ್ಷ ದ್ವಿತೀಯ ಹಾಗೂ ಮಳವಂಡ. ಜಿ. ಚೆಂಗಪ್ಪ ಮತ್ತು ಪುಟ್ಟ ಬಸಪ್ಪ ತೃತೀಯ ಸ್ಥಾನ ಪಡೆದಿದ್ದಾರೆ.
ಸ್ಪರ್ಧೆಯ ತೀರ್ಪುಗಾರರಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಆರ್. ಸÀಂತೋಷ್ ನಾಯಕ್ ಮತ್ತು ಬಳಗ ಕಾರ್ಯನಿರ್ವಹಿಸಿದ್ದಾರೆ.
ಸಿರಿಗನ್ನಡ ವೇದಿಕೆಯ ಉದ್ದೇಶವಾಗಿದ್ದ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರನ್ನು ವರ್ತಮಾನಿಗಳು ನೆನಪಿಸಿಕೊಳ್ಳುವ ಉದ್ದೇಶವನ್ನು ವಿದ್ಯಾರ್ಥಿ ಸಮುದಾಯದ ಬರಹಗಳು ಸಾಬೀತುಪಡಿಸಿದ್ದು, ಉಳಿದ ಬರಹಗಾರರೂ ಅವರುಗಳು ಆರಿಸಿಕೊಂಡ ಸ್ವಾತಂತ್ರ್ಯ ಹೋರಾಟದ ವ್ಯಕ್ತಿಗಳ ಬಗ್ಗೆ ಬರೆದ ಬರಹಗಳು ಸಂಶೋಧನಾ ಆಸಕ್ತಿ ತೋರಿಸಿರುವುದನ್ನು ಸಾಬೀತುಪಡಿಸಿದೆ ಎಂದು ಕೊಡಗು ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಅಲ್ಲಾರಂಠ ವಿಠಲ್ ನಂಜಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.