ಸಮಸ್ಯೆಗಳಿಗೆ ಸ್ಪಂದಿಸಲು ಮಡಿಕೇರಿ ಹಿತರಕ್ಷಣಾ ವೇದಿಕೆ ಮನವಿ

01/09/2020

ಮಡಿಕೇರಿ ಆ.31 : ರಸ್ತೆ ಅವ್ಯವಸ್ಥೆ ಸೇರಿದಂತೆ ಮಡಿಕೇರಿ ನಗರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಕ್ಷಣ ನಗರಸಭೆ ಸ್ಪಂದಿಸಬೇಕೆಂದು ಮಡಿಕೇರಿ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.
ನೂತನವಾಗಿ ಅಧಿಕಾರ ವಹಿಸಿಕೊಂಡ ಪೌರಾಯುಕ್ತ ರಾಮದಾಸ್ ಅವರನ್ನು ಭೇಟಿಯಾದ ವೇದಿಕೆಯ ಅಧ್ಯಕ್ಷ ರವೀಗೌಡ ಹಾಗೂ ಪದಾಧಿಕಾರಿಗಳು ರಸ್ತೆಗಳನ್ನು ತಕ್ಷಣ ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿದರು. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವಂತೆ ತಿಳಿಸಿದರು. ವೇದಿಕೆಯ ಸಂಘಟನಾ ಕಾರ್ಯದರ್ಶಿ ನಾಗೇಶ್, ಸುರೇಶ್ ಕುಮಾರ್, ರಕ್ಷಿತ್, ವಸಂತ್, ನಂದಿನಿ ಮತ್ತಿತರರು ಹಾಜರಿದ್ದರು.