ನೋಟು ನಿಷೇಧ ಜಿಡಿಪಿ ಕುಸಿತಕ್ಕೆ ಕಾರಣ

04/09/2020

ನವದೆಹಲಿ : ಕೇಂದ್ರದ ವಿರುದ್ಧ ತನ್ನ ಟೀಕಾ ಪ್ರಹಾರವನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಜಿಡಿಪಿ ಅಂಕಿ ಸಂಖ್ಯೆಗಳಲ್ಲಿ ಪ್ರತಿಫಲನಗೊಂಡಿರುವ ಭಾರತದ ಕಳಪೆ ಆರ್ಥಿಕ ಸಾಧನೆಯು ಸರಕಾರದ 2016ರ ನೋಟು ನಿಷೇಧ ನೀತಿಯ ನೇರ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ.
2016 ನ. 8 ರಂದು ಉರುಳಿಸಿದ್ದ ದಾಳ 2020 ಆ. 31 ರಂದು ಭಯಂಕರ ಫಲಿತಾಂಶವನ್ನು ನೀಡಿದೆ ಎಂದು ಅವರು ಟ್ವೀಟಿಸಿದ್ದಾರೆ.