ಕೊಡಗು ಮೊಗೇರ ಸಮಾಜದಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

07/09/2020

ಮಡಿಕೇರಿ ಸೆ.7 : ದ್ವೀತಿಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 558 ಅಂಕ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದ ಸಂಪಾಜೆ ಗ್ರಾಮದ ಅರಮನೆ ತೋಟದ ವಿದ್ಯಾರ್ಥಿನಿ ಹೆಚ್.ಸಿ.ಗೀತಾ ಹಾಗೂ 10 ನೇ ತರಗತಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢ ಶಾಲಾ ವಿಭಾಗದಲ್ಲಿ ಮಡಿಕೇರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಹಾಕತ್ತೂರು ಶಾಲೆಯ ವಿದ್ಯಾರ್ಥಿನಿ ಬಿಳಿಗೇರಿಯ ಪಿ.ಎಸ್.ಕವನಳನ್ನು ಕೊಡಗು ಜಿಲ್ಲಾ ಮೊಗೇರ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಾಧಕ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಸಮಾಜದ ಪ್ರಮುಖರು ಅಭಿನಂದನೆ ಸಲ್ಲಿಸಿದರು. ಮುಂದಿನ ವ್ಯಾಸಂಗಕ್ಕೆ ಶಾಲಾ ಶುಲ್ಕ ಮತ್ತು ನೋಟ್ ಪುಸ್ತಕಗಳನ್ನು ನೀಡುವ ಭರವಸೆಯನ್ನು ನೀಡಿದರು.
ಮೊಗೇರ ಸಮಾಜದ ಗೌರವಾಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ, ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಬಿ.ಶಿವಪ್ಪ, ಸದಸ್ಯ ಗೌತಮ್ ಶಿವಪ್ಪ, ಹಿರಿಯ ಸಲಹೆಗಾರ ಪೂವಯ್ಯ, ಸಮಾಜದ ಸದಸ್ಯರಾದ ರಮೇಶ್, ರಾಕೇಶ್, ಸಂಪಾಜೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೊರಗಪ್ಪ, ಅರಮನೆ ತೋಟದ ಮಹಾವಿಷ್ಣು ಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷ ಶಭರೀಶ್ ಕುದ್ಕುಳಿ, ವಿದ್ಯಾರ್ಥಿಗಳ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.