ಕಾರು ಪಲ್ಟಿಯಾದರೂ ಬದುಕುಳಿದರು : ಸೋಮವಾರಪೇಟೆಯಲ್ಲಿ ಘಟನೆ

13/09/2020

ಮಡಿಕೇರಿ ಸೆ.13 : ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಸೋಮವಾರಪೇಟೆ ಪಟ್ಟಣಕ್ಕೆ ಸಮೀಪದ ಯಡವನಾಡು ಗ್ರಾಮದ ಬಳಿ ಸಂಭವಿಸಿದೆ.
ಕೃಷಿ ಇಲಾಖೆಯ ಅಧಿಕಾರಿ ಪುರಂದರ ಅವರು ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಸೋಮವಾರಪೇಟೆಗೆ ಬರುತ್ತಿದ್ದ ಬಜೆಗುಂಡಿಯ ರಂಜಿತ್ ಎಂಬುವವರ ಕಾರು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಯಡವನಾಡು ಎಮ್ಮೆ ಬಸವಣ್ಣ ದೇವಾಲಯದ ಚಪ್ಪರಕ್ಕೆ ಅಪ್ಪಳಿಸಿದ ಕಾರು ಮಗುಚಿ ಬಿದ್ದಿದೆ. ಆದರೆ ಎರಡೂ ಕಾರಿನಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ.