ಶಕ್ತಿ ಕೇಂದ್ರದ ಪ್ರಮುಖ್ ಆಗಿ ಪ್ರಶಾಂತ್ ಹಾಗೂ ವಾಸುದೇವ್ ಆಯ್ಕೆ

ಸುಂಟಿಕೊಪ್ಪ,ಸೆ.16: ಸುಂಟಿಕೊಪ್ಪ 1ನೇ ಬೂತ್ ಶಕ್ತಿ ಕೇಂದ್ರದ ಪ್ರಮುಖ್ ಆಗಿ ಬಿ.ಕೆ.ಪ್ರಶಾಂತ್ (ಕೊಕ), 2ನೇ ಶಕ್ತಿ ಕೇಂದ್ರದ ಪ್ರಮುಖ್ ಆಗಿ ವಾಸುದೇವ್ ಅವರನ್ನು ನೇಮಕಗೊಳಿಸಲಾಯಿತು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯನ್ನು ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಮೊದಲಿಗೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಬಿ.ಬಿ.ಭಾರತೀಶ್ ಪಕ್ಷದ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಶಾಸಕರಾದ ಅಪ್ಪಚ್ಚು ರಂಜನ್ ಅವರು ಸುಂಟಿಕೊಪ್ಪ 8 ಬೂತ್ಗಳಿದ್ದು 4 ಬೂತ್ಗೆ ಓರ್ವರನ್ನು ಬೂತ್ ಪ್ರಮುಖ್ ಆಗಿ 2 ಬೂತ್ ಅಧ್ಯಕ್ಷರುಗಳನ್ನು ಆಯ್ಕೆ ಮಾಡಿದರು ಇದರಲ್ಲಿ ಸುಂಟಿಕೊಪ್ಪ ಪಟ್ಟಣದ 4 ಬೂತ್ನ ಶಕ್ತಿ ಕೇಂದ್ರ ಪ್ರಮುಖ್ ಆಗಿ ಪ್ರಶಾಂತ್ (ಕೊಕಾ) ಸಹ ಪ್ರಮುಖ್ ಆಗಿ ಬಿ.ಕೆ.ರಂಜಿತ್ ಕುಮಾರ್ ಅವರನ್ನು ನೇಮಕಗೊಳಿಸಲಾಯಿತು.
2ನೇ ಶಕ್ತಿ ಕೇಂದ್ರದ ಬೂತ್ ಪ್ರಮುಖ್ ಆಗಿ ವಾಸುದೇವ, ಸಹ ಪ್ರಮುಖ್ ನಾಗೇಶ್ ಪೂಜಾರಿ ಇವರನ್ನು ನೇಮಕಗೊಳಿಸಲಾಯಿತು.
ಯುವ ಮೋರ್ಚ ಅಧ್ಯಕ್ಷರಾಗಿ ವಿಘ್ನೇಶ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ಆನಂದ, ಒಬಿಸಿ ಅಧ್ಯಕ್ಷರಾಗಿ ಸಿ.ಸಿ.ಸುನೀಲ್,ಕೃಷಿ ಮೋರ್ಚಕ್ಕೆ ರಮೇಶ್ ಪಿಳ್ಳೆ ಅವರುಗಳನ್ನು ಆಯ್ಕೆಗೊಳಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕರ್ಯದರ್ಶಿ ಹೂಲುರು ಕೊಪ್ಪ ಮಾದಪ, ತಾಲೂಕು ಮಂಡಲ ಅಧ್ಯಕ್ಷ ಮನು ರೈ, ಉಪಾಧ್ಯಕ್ಷ ದಸಂಡ ರಮೇಶ್ ಚಂಗಪ್ಪ, ಶಶಿಕಾಂತ ರೈ, ಮಾಜಿ ಅಧ್ಯಕ್ಷ ಕೊಮರಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಮೊಕ್ಷಿತ್, ತಾಲೂಕು ಪಂಚಾಯಿತಿ ಸದಸ್ಯೆ ವಿಮಾಲವತಿ, ಹಾಗೂ ಗೌತಮಿ, ತಾಲೂಕು ಕಾರ್ಯದರ್ಶಿ ಇಂದ್ರ ರಮೇಶ್, ಮಾಜಿ ನಗರ ಅಧ್ಯಕ್ಷ ಬಿ.ಕೆ.ಮೋಹನ್,ಬಿ.ಐ.ಭವಾನಿ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
