ಚಳಿಗಾಲದಲ್ಲೂ ಶತ್ರು ಸೇನೆಯನ್ನು ಎದುರಿಸಲಿದ್ದೇವೆ

17/09/2020

ನವದೆಹಲಿ ಸೆ.17 : ಪೂರ್ವ ಲಡಾಖ್ ನಲ್ಲಿ ಚೀನಾ ಯುದ್ಧದ ಅನಿವಾರ್ಯತೆ ಸೃಷ್ಟಿಸಿದರೆ ಸೇನೆ ಸಮರಕ್ಕೂ ಸರ್ವ ಸನ್ನದ್ಧ ಸ್ಥಿತಿಯಲ್ಲಿದ್ದೂ ಚಳಿಗಾಲದಲ್ಲೂ ಸಮರ್ಥವಾಗಿ ಶತ್ರು ಸೇನೆಯನ್ನು ಎದುರಿಸಲಿದೆ ಎಂದು ಭಾರತೀಯ ಸೇನೆ ಘೋಷಿಸಿದೆ.
ಭಾರತೀಯ ಸೇನೆ ಪೂರ್ಣ ಪ್ರಮಾಣದ ಯುದ್ಧ ಸಿದ್ಧತೆ ಮಾಡಿಕೊಂಡು ಸಜ್ಜಾಗಿದೆ. ಯಾವ ಸಂದರ್ಭದಲ್ಲೂ ಚೀನಾ ಸೇನೆ ಯುದ್ಧಕ್ಕೆ ಮುಂದಾದರೆ ಅದಕ್ಕೆ ಭಾರತೀಯ ಸೇನೆ ಸಹ ಹೋರಾಡಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಚಳಿಗಾಲದಲ್ಲಿ ಯುದ್ಧ ನಡೆಸುವಷ್ಟು ಸಾಮಥ್ರ್ಯ ಭಾರತೀಯ ಸೇನೆಗಿಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿತ್ತು. ಇದಕ್ಕೆ ತಿರುಗೇಟು ನೀಡಿರುವ ಭಾರತೀಯ ಸೇನೆ, ಚೀನಾ ಪಡೆಯ ಯೋಧರು ಬಹುತೇಕ ನಗರ ಪ್ರದೇಶದವರಾಗಿದ್ದು ಯುದ್ಧ ಭೂಮಿಯ ಕಷ್ಟಕರ ಸನ್ನಿವೇಶ ಹಾಗೂ ದೀರ್ಘಕಾಲದ ಹೋರಾಟ ಅವರಿಗೆ ಅಭ್ಯಾಸವಿಲ್ಲ ಎಂದು ಹೇಳಿದೆ.
ಪೂರ್ವ ಲಡಾಖ್ ವಲಯದಲ್ಲಿ ಚಳಿಗಾಲದಲ್ಲೂ ಭಾರತೀಯ ಸೇನೆ ಚೀನಾಗಿಂತಲೂ ಸಮರ್ಥವಾಗಿ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗುವಷ್ಟು ಸಾಮಥ್ರ್ಯವಿದೆ ಎಂದು ಸೇನೆ ಗುಡುಗಿದೆ.