ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2194 ಕ್ಕೆ ಏರಿಕೆ : 4 ವರ್ಷದ ಬಾಲಕಿಗೆ ಸೋಂಕು

18/09/2020

ಮಡಿಕೇರಿ ಸೆ.18 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2194 ಕ್ಕೆ ಏರಿಕೆಯಾಗಿದ್ದು, 1779 ಮಂದಿ ಗುಣಮುಖರಾಗಿದ್ದಾರೆ. 385 ಸಕ್ರಿಯ ಪ್ರಕರಣಗಳಿದ್ದು, 30 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 332 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 27 ಮತ್ತು ಮಧ್ಯಾಹ್ನ 18 ಸೇರಿ ಒಟ್ಟು 45 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ಕುಶಾಲನಗರ ಕರಿಯಪ್ಪ ಬಡಾವಣೆಯ 13 ವರ್ಷದ ಬಾಲಕ, 4 ವರ್ಷದ ಬಾಲಕಿ, 82 ವರ್ಷದ ಮಹಿಳೆ, 52 ವರ್ಷದ ಪುರುಷ, ಸಿದ್ದಾಪುರದ ಅಂಬೇಡ್ಕರ್ ನಗರದ 13 ವರ್ಷದ ಬಾಲಕಿ, 70 ವರ್ಷದ ಮಹಿಳೆ ಮತ್ತು ಕುಶಾಲನಗರ ನಾಗೇಗೌಡ ಎಕ್ಸ್‍ಟೆನ್ಸ್‍ನ್ನಿನ 19 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ಹೊಲಗುಂದದ 40 ವರ್ಷದ ಪುರುಷ, ವಿರಾಜಪೇಟೆ ಚಿಕ್ಕಪೇಟೆಯ ಆಂಜನೇಯ ದೇವಾಲಯ ಸಮೀಪದ 80 ವರ್ಷದ ಮಹಿಳೆ. ವಿರಾಜಪೇಟೆ ಸುಣ್ಣದ ಬೀದಿಯ ಮಸೀದಿ ಸಮೀಪದ 52 ವರ್ಷದ ಪುರುಷ. ವಿರಾಜಪೇಟೆ ನೆಹರೂ ನಗರದ ಅಂಗನವಾಡಿ ಸಮೀಪದ 37 ವರ್ಷದ ಪುರುಷ. ಸೋಮವಾರಪೇಟೆ ಕಾರ್ಕಳ್ಳಿ ಗ್ರಾಮದ ಕಟ್ಟೆ ಬಸವೇಶ್ವರ ದೇವಾಲಯ ಸಮೀಪದ 68 ವರ್ಷದ ಪುರುಷ. ವಿರಾಜಪೇಟೆ ಬಿಲೂರು ಪೆÇನ್ನಪ್ಪ ಸಂತೆಯ ಈಶ್ವರ ದೇವಾಲಯ ರಸ್ತೆಯ 30 ವರ್ಷದ ಮಹಿಳೆ ಮತ್ತಿ 38 ವರ್ಷದ ಪುರುಷ. ಗೋಣಿಕೊಪ್ಪ ಬೈಪಾಸ್ ರಸ್ತೆಯ 33 ವರ್ಷದ ಪುರುಷ. ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿಯ 31 ವರ್ಷದ ಪುರುಷ. ಕುಶಾಲನಗರ ರಾಧಾಕೃಷ್ಣ ಲೇಔಟಿನ 4ನೇ ಬ್ಲಾಕಿನ 43 ವರ್ಷದ ಪುರುಷ. ಕುಶಾಲನಗರ ಗೊಂದಿಬಸವನಹಳ್ಳಿಯ 24 ವರ್ಷದ ಮಹಿಳೆ. ಕುಶಾಲನಗರ ಕರಿಯಪ್ಪ ಎಕ್ಸ್‍ಟೆನ್ಸ್‍ನ್ನಿನ 65 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಬೆಟ್ಟಗೇರಿ ಟೌನಿನ ಏರ್ಟೆಲ್ ಟವರ್ ಸಮೀಪದ 42 ವರ್ಷದ ಪುರುಷ. ಭಾಗಮಂಡಲ ಅಯ್ಯಂಗೇರಿ ಟೌನಿನ 55 ವರ್ಷದ ಪುರುಷ. ಸುಂಟಿಕೊಪ್ಪ 7ನೇ ಹೊಸಕೋಟೆಯ 1ನೇ ಬ್ಲಾಕ್‍ನ ಯೂನಿಯನ್ ಬ್ಯಾಂಕ್ ಸಮೀಪದ 33 ವರ್ಷದ ಪುರುಷ. ಭಾಗಮಂಡಲ ಬಿಸಿಎಂ ಹಾಸ್ಟೆಲ್ ನ 32 ವರ್ಷದ ಪುರುಷ. ಮಡಿಕೇರಿ ಕನ್ನಂಡಬಾಣೆಯ 47 ವರ್ಷದ ಪುರುಷ. ಕಣರ್ಂಗೇರಿ ಕಾರಾಗೃಹ ವಸತಿಗೃಹದ 27 ವರ್ಷದ ಪುರುಷ. ಮಡಿಕೇರಿ ಹೊಸ ಬಡಾವಣೆ ಸಮೀಪದ 34 ವರ್ಷದ ಮಹಿಳೆ. ಮಡಿಕೇರಿ ಹೆಬ್ಬೆಟ್ಟಗೇರಿ ಗ್ರಾಮದ ಗಾಳಿಬೀಡು ರಸ್ತೆಯ 72 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪ ಅರವತ್ತೊಕ್ಲುವಿನ ಜೋಡುಪಟ್ಟಿ ಅಂಬೇಡ್ಕರ್ ಭವನ ಸಮೀಪದ 60 ವರ್ಷದ ಮಹಿಳೆ. ಮಡಿಕೇರಿ ಹೊದವಾಡದ ಕೋತಮುಡಿ ಗ್ರಾಮದ ಸರ್ಕಾರಿ ಶಾಲೆ ಸಮೀಪದ 27 ವರ್ಷದ ಮಹಿಳೆ. ಸೋಮವಾರಪೇಟೆ ಎಂಡಿ ಬ್ಲಾಕ್‍ನ 45 ವರ್ಷದ ಪುರುಷ. ಕುಶಾಲನಗರ ಬಸವೇಶ್ವರ ಬಡಾವಣೆಯ 29 ವರ್ಷದ ಪುರುಷ. ಮಡಿಕೇರಿ ಚೈನ್ ಗೇಟ್ ವಿ.ಎಸ್.ಎಸ್.ಎನ್ ಸೊಸೈಟಿ ಸಮೀಪದ 85 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆಯ ಪೊನ್ನಂಪೇಟೆ ಕಾನೂರು ಜಂಕ್ಷನ್‍ನ 58 ವರ್ಷದ ಪುರುಷ. ವಿರಾಜಪೇಟೆ ಪೆÇನ್ನಂಪೇಟೆಯ ಜೋಡುಪಟ್ಟಿ ಸಮೀಪದ 34 ವರ್ಷದ ಪುರುಷ. ಮಡಿಕೇರಿ ಡಿಸಿ ಬಂಗಲೆ ಸಮೀಪದ 52 ವರ್ಷದ ಪುರುಷ. ಸೋಮವಾರಪೇಟೆ ತಾಳತ್ತರಶೆಟ್ಟಳ್ಳಿ ಬೈರವೇಶ್ವರ ದೇವಾಲಯ ಸಮೀಪದ 61 ವರ್ಷದ ಮಹಿಳೆ. ಕುಶಾಲನಗರ ವಿವೇಕಾನಂದ ಬಡಾವಣೆಯ 30 ವರ್ಷದ ಪುರುಷ. ಕುಶಾಲನಗರ ರಾಧಕೃಷ್ಣ ಬಡಾವಣೆಯ 24 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 32 ವರ್ಷದ ಮಹಿಳೆ. ಕುಶಾಲನಗರ ಕೂಡಿಗೆಯ ವೃತ್ತದ 49 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಕಿಗ್ಗೋಳು ವಿಷ್ಣಪ್ಪ ದೇವಾಲಯ ಸಮೀಪದ 60 ವರ್ಷದ ಪುರುಷ. ಕುಶಾಲನಗರ ಕೂಡಿಗೆ ಗ್ರಾಮ ಮತ್ತು ಅಂಚೆಯ 46 ವರ್ಷದ ಮಹಿಳೆ. ಪಿರಿಯಾಪಟ್ಟಣ ಬೆಟ್ಟದಪುರದ 36 ವರ್ಷದ ಪುರುಷ. ಮಡಿಕೇರಿ ಕಣರ್ಂಗೇರಿ ಕಾರಾಗೃಹ ವಸತಿಗೃಹದ 30 ವರ್ಷದ ಪುರುಷ. ಕುಶಾಲನಗರ ಬಸವೇಶ್ವರ ಬಡಾವಣೆಯ 48 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.