ಮಸೂದೆಗೆ ಹೆಚ್.ಡಿ.ದೇವೇಗೌಡ ವಿರೋಧ

21/09/2020

ನವದೆಹಲಿ ಸೆ.20 : ಕೇಂದ್ರ ಸರ್ಕಾರ ಮಂಡಿಸಿರುವ ವಿವಾದಿತ ಕೃಷಿ ಮಸೂದೆಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದಿನ ಕಲಾಪದ ಚರ್ಚೆಯಲ್ಲಿ ಮಾತನಾಡಿದ ಅವರು ರೈತನ ಮಗನಾಗಿ ನಾನು ಈ ಮಸೂದೆಯನ್ನು ವಿರೋಧಿಸುತ್ತೇನೆ. ರೈತರ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳಿಗೆ ಕಾಳಜಿ ಇದೆ. ಆದರೆ ಕೇಂದ್ರ ಸರ್ಕಾರ ಈ ನಡೆ ಆತುರ ನಿರ್ಧಾರ ಈ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯ ಇತ್ತು ಎಂದು ಅಭಿಪ್ರಾಯಪಟ್ಟರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಮೂರು ನಿಮಿಷ ಮಾತಾಡೋಕೆ ಅವಕಾಶ ಸಿಕ್ಕಿತ್ತು. ಆದರೆ ಈ ಬಿಲ್‍ನ ಒಳಹೊಕ್ಕಿ ನೋಡಿದರೆ ರೈತರ ಶೋಷಣೆಯೇ ಜಾಸ್ತಿ. ಹೀಗಾಗೀ ಹೆಚ್ಚಿನ ಸಮಯ ಮಾತನಾಡಲು ಬೇಕಿತ್ತು. ಆದರೆ ಅವಕಾಶ ಸಿಗಲಿಲ್ಲ. ಈ ಬಿಲ್?ಗೆ ನನ್ನ ವಿರೋಧವಿದೆ. ರೈತರಿಗೆ ಇದರಿಂದ ಯಾವುದೇ ಒಳಿತಿಲ್ಲ, ನೀತಿ ಆಯೋಗ ನೀಡಿರುವ ವರದಿಯನ್ನೇ ಮೋದಿ ಸರ್ಕಾರ ಒಪ್ಪುತ್ತಿಲ್ಲ. ರೈತರ ವಿರೋಧಿ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.