ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

September 22, 2020

ಬೆಂಗಳೂರು ಸೆ.22 : ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ನಟಿ ರಾಗಿಣಿ, ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಎನ್ ಡಿಪಿಎಸ್ ವಿಶೇಷ ಕೋರ್ಟ್ ಸೆ.24ಕ್ಕೆ ಮುಂದೂಡಿದೆ.
ರಾಗಿಣಿ ಮತ್ತು ಸಂಜನಾರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಎನ್ ಡಿಪಿಎಸ್ ಕೋರ್ಟ್ ಮುಂದು ಹಾಜರುಪಡಿಸಲಾಗಿತ್ತು. ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದ್ದರಿಂದ ನಟಿಯರಿಬ್ಬರಿಗೂ ಇನ್ನು ಮೂರು ದಿನ ಜೈಲಿನಲ್ಲೇ ಕಳೆಯಬೇಕಾಗುತ್ತದೆ.
ರಾಗಿಣಿ ಜಾಮೀನು ಅರ್ಜಿಗೆ ಸರ್ಕಾರದ ಪರ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳಿಂದ ಆಕೆಗೆ ಹಲವರ ಪರಿಚಯವಿದ್ದು, ಜಾಮೀನು ಪಡೆದು ಹೊರಬಂದಲ್ಲಿ ಅವರನ್ನೆಲ್ಲ ಎಚ್ಚರಿಸುವ ಸಾಧ್ಯತೆಯಿದೆ ಎಂದು ವಾದ ಮಂಡಿಸಿದರು.

error: Content is protected !!