ಕೋವಿಡ್ ನಿಂದ ಕೊಡಗಿನಲ್ಲಿ 44 ಮಂದಿ ಸಾವು
01/10/2020

ಮಡಿಕೇರಿ ಅ.1 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸಾವಿನ ಸಂಖ್ಯೆ 44 ಕ್ಕೆ ತಲುಪಿದೆ.
ಕೋವಿಡ್ ಆಸ್ಪತ್ರೆ 102, ಕೋವಿಡ್ ಕೇರ್ ಸೆಂಟರ್ 62 ಮತ್ತು ಹೋಂ ಐಸೋಲೇಶನ್ ನಲ್ಲಿ 265 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ಕೋವಿಡ್ ಸೋಂಕಿನಿಂದ 4 ಸಾವು ಸಂಭವಿಸಿದೆ.
ಮಡಿಕೇರಿ ತಾಲ್ಲೂಕು ನಿವಾಸಿ 74 ವರ್ಷದ ವೃದ್ಧ, ಸೋಮವಾರಪೇಟೆ ಪಟ್ಟಣದ ನಿವಾಸಿ 33 ವರ್ಷದ ಪುರುಷ, ಕುಶಾಲನಗರ ನಿವಾಸಿ 50 ವರ್ಷದ ಪುರುಷ, 83 ವರ್ಷದ ಮಹಿಳೆ ವೃದ್ಧೆ ಮೃತ ಪಟ್ಟಿದ್ದಾರೆ.